Telegram Join My Telegram   WhatsApp Join My WhatsApp

West Asia Conflict: ದೇಶಕ್ಕೆ ಮೋದಿ ಮನವಿ

Oil ಉಳಿಸಿ, Work From Home ಗೆ ಆದ್ಯತೆ ನೀಡಿ, ಒಂದು ವರ್ಷ ಚಿನ್ನ ಖರೀದಿ ಬೇಡ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಪ್ರಧಾನಿ ಮೋದಿ ನೀಡಿದ ಮಹತ್ವದ ಸಂದೇಶ!

ಇತ್ತೀಚಿಗೆ ನಾವು ನೋಡುತ್ತಿರೋವುದೇ ಇರಾನ್ ಇಸ್ರೇಲ್ ಯುದ್ಧ. ಇದು ಯಾವ ರೀತಿ ಪರಿಣಾಮ ಬೀರಿದೆ ಎಂದರೆ ಜನ ಸಾಮಾನ್ಯರು ಜೀವನ ನಡೆಸುವುದೇ ತುಂಬಾ ಕಷ್ಟಕರ ಸಂಗತಿ ಆದಂತೆ ಇದೆ. ನಾವು ಈ ಗಂಭೀರ ಪರಿಣಾಮವನ್ನು ಯಾವ ರೀತಿ ಎದುರಿಸಬೇಕು ಎಂಬುದು ಸ್ಪಲ್ಪ ಕ್ಲಿಷ್ಟಕರ ಎನಿಸಿದರೂ ಜೀವನ ನಡೆಸಲೇ ಬೇಕು. ಈ ಯುದ್ಧದ ಬಗ್ಗೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಲಹೆಯನ್ನು ನೀಡಿದ್ದಾರೆ. ಅದೇನಂದರೆ,

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಈಗ ಜಗತ್ತಿನ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ. ಯುದ್ಧದ ಪರಿಣಾಮವಾಗಿ ತೈಲದ ಬೆಲೆ ಏರಿಕೆ, ಚಿನ್ನದ ದರದಲ್ಲಿ ಭಾರೀ ಅಸ್ಥಿರತೆ, ಸಾಗಣೆ ವೆಚ್ಚ ಹೆಚ್ಚಳ ಹಾಗೂ ಸಾಮಾನ್ಯ ಜನರ ಜೀವನ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ನರೇಂದ್ರ ಮೋದಿ ಗಮನಿಸಿ ಜನರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಸಾಮಾನ್ಯ ಜನರು ಮತ್ತು ಎಲ್ಲಾ ವರ್ಗದ ಜನರ ಹಿತಾಸಕ್ತಿಯಿಂದ ಹೇಳಿದ್ದಾರೆ.  ಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “Oil ಅನ್ನು ಜಾಗ್ರತೆಯಿಂದ ಬಳಸಿ, ಸಾಧ್ಯವಾದರೆ Work From Home ಅನುಸರಿಸಿ, ಒಂದು ವರ್ಷ Gold ಖರೀದಿ ತಪ್ಪಿಸಿ” ಎಂಬ ಮಾತುಗಳು ಜನರ ಗಮನ ಸೆಳೆದಿವೆ. ಈ ಹೇಳಿಕೆ ಕೇವಲ ಸಲಹೆಯಲ್ಲ; ಭವಿಷ್ಯದ ಆರ್ಥಿಕ ಸವಾಲುಗಳ ಬಗ್ಗೆ ಮುನ್ನೆಚ್ಚರಿಕೆಯ ಸೂಚನೆಯಾಗಿಯೂ ಜನರು ನೋಡುತ್ತಿದ್ದಾರೆ. ಇದು ಮೋದಿ ಹೇಳಿರುವುದು ಸಂತಸ ವ್ಯಕ್ತಪಡಿಸುವ ವಿಷಯವಾಗಿದೆ. ಇದು ಜನರನ್ನು ಹೆದರಿಸುವ ಸಂದೇಶವಾಗಿ ನೋಡಬೇಕಾಗಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗುವ ಸಮಯದಲ್ಲಿ ಉಳಿತಾಯ ಎಷ್ಟು ಮುಖ್ಯ ಮತ್ತು ಜವಾಬ್ದಾರಿಯ ಬಳಕೆ ಎಷ್ಟು ಮುಖ್ಯ ಎಂಬುದನ್ನು ಮೋದಿ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಹೇಳಿದ ಪ್ರಮುಖ ಅಂಶಗಳು!

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾದಾಗ ಮೊದಲ ಪರಿಣಾಮ ಬೀರುವ ಕ್ಷೇತ್ರವೆಂದರೆ ಇಂಧನ ಮಾರುಕಟ್ಟೆ. ಭಾರತವು ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ದೇಶ. ಅಲ್ಲಿ ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಉಂಟಾದರೆ ಪೆಟ್ರೋಲ್, ಡೀಸೆಲ್, LPG ಹಾಗೂ ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಕಾರಣಕ್ಕೆ ಪ್ರಧಾನಿ ಜನರಿಗೆ “ಅಗತ್ಯವಿದ್ದಾಗ ಮಾತ್ರ ವಾಹನ ಬಳಸಿ, ಅನಾವಶ್ಯಕ ಪ್ರಯಾಣ ಕಡಿಮೆ ಮಾಡಿ” ಎಂಬ ಅರ್ಥದಲ್ಲಿ ಎಣ್ಣೆ ಉಳಿಸುವ ಸಂದೇಶ ನೀಡಿರುವಂತೆ ಕಾಣುತ್ತದೆ.

1. Work from home ಗೆ ಆದ್ಯತೆ ಯಾಕೆ?

Work From Home ಬಗ್ಗೆ ಮಾಡಿದ ಉಲ್ಲೇಖವೂ ಇದೇ ಹಿನ್ನೆಲೆಯಲ್ಲಿದೆ. ಕೊರೋನಾ ಸಮಯದಲ್ಲಿ ಜನರು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಈಗ ಮತ್ತೆ ಇಂಧನ ಬಳಕೆ ಕಡಿಮೆ ಮಾಡಲು, ಟ್ರಾಫಿಕ್ ಕಡಿಮೆ ಮಾಡಲು ಮತ್ತು ಕಚೇರಿ ವೆಚ್ಚವನ್ನು ನಿಯಂತ್ರಿಸಲು WFH ಒಂದು ಪರಿಹಾರವಾಗಿ ಪರಿಗಣಿಸಲಾಗುತ್ತಿದೆ. ದಿನವೂ ದೂರ ಪ್ರಯಾಣ ಮಾಡುವ ನೌಕರರಿಗೆ ಇದು ಹಣ ಉಳಿಸುವ ಮಾರ್ಗವಾಗಬಹುದು.

  • ಇಂಧನ ಬಳಕೆ ಕಡಿಮೆ ಆಗುತ್ತದೆ.
  • ಟ್ರಾಫಿಕ್ ಕಡಿಮೆ ಆಗುತ್ತದೆ.
  • ಅನಗತ್ಯ ವಾಹನ ಬಳಕೆ ಕಡಿಮೆ ಆಗುತ್ತದೆ.
  • ಸಾರ್ವಜನಿಕ ಸಾರಿಗೆ ಹೆಚ್ಚು ಬಳಕೆ.

ಕೋರೋನ ಸಮಯದಲ್ಲಿ ಭಾರತ ಇದನ್ನು ಅನುಭವಿಸಿದೆ. ಈಗ ಮತ್ತೆ ಇದೆ ಮಾದರಿಯನ್ನು ಅನುಸರಿಸುವುದು ಉತ್ತಮ.

 

2. “ಒಂದು ವರ್ಷ ಚಿನ್ನ ಖರೀದಿಸಬೇಡಿ ” ಎಂಬುದರ ಅರ್ಥ!

“ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ” ಎಂಬ ಮಾತು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ; ಅದು ಭಾವನೆ ಮತ್ತು ಹೂಡಿಕೆಯ ಪ್ರತೀಕ. ಆದರೆ ಜಾಗತಿಕ ಅನಿಶ್ಚಿತತೆ ಹೆಚ್ಚಾದಾಗ ಚಿನ್ನದ ಬೆಲೆ ವೇಗವಾಗಿ ಏರುತ್ತದೆ. ಇಂತಹ ಸಮಯದಲ್ಲಿ ಜನರು ಅತಿಯಾಗಿ ಚಿನ್ನ ಖರೀದಿಸಿದರೆ ದೇಶದ ವಿದೇಶಿ ವಿನಿಮಯ ಮೇಲೂ ಒತ್ತಡ ಬೀಳಬಹುದು. ಆದ್ದರಿಂದ ತಾತ್ಕಾಲಿಕವಾಗಿ ಅಗತ್ಯವಿಲ್ಲದ ಖರ್ಚುಗಳನ್ನು ನಿಯಂತ್ರಿಸಿ, ಹಣವನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಇದರಲ್ಲಿ ಅಡಗಿದೆ. ಚಿನ್ನ ಎಂಬುದು ಭಾರತದ ಸಾಂಪ್ರದಾಯಕ ಒಂದು ಉಡುಗೆ ಆಗಿದೆ. ಜನರು ಚಿನ್ನ ಖರೀದಿಸಲು ಮದುವೆ ಸಮಾರಂಭಗಳು ಇತರೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದು ರೂಢಿಯೆಂದ ಬಂದಿದೆ ಅದರಂತೆ ಜನರು ಈ ಸಮಾರಂಭದಲ್ಲಿ ಚಿನ್ನ ಖರೀದಿಸುವುದು ಸರಿಯೇ ತಪ್ಪೇ ಎಂದು ಹೇಳುವ ಮೋದಿಜಿ ಅವರು ಈ ವರ್ಷ ಬೇಡ ಮುಂದಿನ ವರ್ಷ ಚಿನ್ನದ ಬೆಲೆ ಕಡಿಮೆ ಆಗಬಹುದು ಆಗ ಖರೀದಿಸಿ ಎಂಬುದು ಈ ಮಾತಿನ ಸಂದೇಶ.

  • ಸಾಮಾನ್ಯ ಮತ್ತು ಮಾದ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಒತ್ತಡ ಆಗಬಹುದು.
  • ಚಿನ್ನದ ಬೆಲೆ ಅತಿಯಾಗಿ ಏರಬಹುದು.
  • ಆರ್ಥಿಕ ಸ್ಥಿರತೆಗೆ ಪರಿಣಾಮ ಬೀರಬಹುದು.
  • ಚಿನ್ನವನ್ನು ಹೆಚ್ಚು ಖರೀದಿಸಿದರೆ ವಿದೇಶಿ ವಿನಿಮಯದ ಮೇಲೆ ಒತ್ತಡ ಬೀಳಬಹುದು.

ಇದರ ಅರ್ಥ ಅವಶ್ಯಕವಿಲ್ಲದ ಖರ್ಚುಗಳಿಗೆ ಕಡಿಮೆ ವೆಚ್ಚವನ್ನು ಹಾಕಿ. ಯಾರೂ ಈ ಮಾತಿಂದ ಹೆದರಿಕೊಳ್ಳುವುದು ಬೇಡ.

3. ಯಾವ ರೀತಿ ಸಾಮಾನ್ಯ ಜನರ ಮೇಲೆ ಪರಿಣಾಮ ಬಿರಬಹುದು? ಎಂದು ಹೇಳಿದ್ದಾರೆ.

ಸಾಮಾನ್ಯ ಜನರ ದೃಷ್ಟಿಯಿಂದ ನೋಡಿದರೆ, ಈ ಮಾತು ಸ್ವಲ್ಪ ಆತಂಕ ಉಂಟುಮಾಡಬಹುದು. “ಯುದ್ಧದ ಪರಿಣಾಮ ಭಾರತಕ್ಕೂ ಬರಬಹುದೇ?” ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ. ಆದರೆ ಇನ್ನೊಂದು ಕಡೆ ಇದು ಮುನ್ನೆಚ್ಚರಿಕೆಯ ಕ್ರಮವಾಗಿಯೂ ಕಾಣಬಹುದು. ಸಂಕಷ್ಟ ಬರುವ ಮೊದಲು ಜನರು ಎಚ್ಚರಿಕೆಯಿಂದ ಖರ್ಚು ಮಾಡುವುದು, ಇಂಧನ ಉಳಿಸುವುದು ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರುವುದು ಉತ್ತಮ ಕ್ರಮವಾಗಿದೆ. ಮೊದಲಿಗೆ ಪೆಟ್ರೋಲ್, ಡೀಸೆಲ್ ಮತ್ತು lpg ಗ್ಯಾಸ್ ದರ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ತಿಂಗಳ ಖರ್ಚು ನಿರ್ವಹಿಸುವುದು ಕಷ್ಟವಾಗಬಹುದು. ಚಿನ್ನ ಬೆಲೆ ಹೆಚ್ಚಾದರೆ ಮದುವೆ ಮತ್ತು ಹೂಡಿಕೆ ಯೋಜನೆಗಳ ಮೇಲು ಪರಿಣಾಮ ಬೀರುತ್ತದೆ. ಒಟ್ಟಿನಲ್ಲಿ ಜಾಗತಿಕ ಸಂಘರ್ಷದ ದೂರದಲ್ಲಿ ನಡೆಯುತ್ತಿದ್ದರೂ ಅದರ ಆರ್ಥಿಕ ಪರಿಣಾಮ ಸಾಮಾನ್ಯ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

  • ಮಧ್ಯಮ ಮತ್ತು ಸಾಮಾನ್ಯ ವರ್ಗದ ಮೇಲೆ ಬಜೆಟ್ ಒತ್ತಡ ಉಂಟಾಗುತ್ತದೆ.
  • ತರಕಾರಿ, ಆಹಾರ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ.
  • ಸಾಮಾನ್ಯ ಜೀವನ ಕಷ್ಟಕರವಾಗಬಹುದು.

ಕೇವಲ ವಸ್ತುಗಳಿಗೆ ಮಾತ್ರ ಅಲ್ಲ ಜನರ ಜೀವನಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದ್ದಾರೆ.

4. ಎಣ್ಣೆ ಉಯಿತಾಯ ಯಾಕೆ ಮಾಡಬೇಕು?

ಭಾರತ ಇನ್ನೂ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧದಿಂದ ತೈಲ ಬೆಲೆ ಏಕಾಏಕಿ ಏರಬಹುದು? ಇದರ ಪರಿಣಾಮವಾಗಿ:

ಗ್ರಾಮೀಣ ಪ್ರದೇಶಗಳಲ್ಲಿ LPG, ಡೀಸೆಲ್ ಹಾಗೂ ಸಾರಿಗೆ ವೆಚ್ಚ ಏರಿದರೆ ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಹೊರೆ ಬೀಳಬಹುದು. ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಕುಟುಂಬಗಳು EMI, ಶಾಲಾ ಶುಲ್ಕ, ದಿನಸಿ ಬೆಲೆ ಏರಿಕೆ ಇತ್ಯಾದಿಗಳ ನಡುವೆ ಇನ್ನಷ್ಟು ಖರ್ಚು ನಿಯಂತ್ರಣ ಮಾಡಬೇಕಾಗಬಹುದು. ಹೀಗಾಗಿ ಪ್ರಧಾನಿಯ ಸಂದೇಶವು “ಭಯಪಡುವುದಕ್ಕಿಂತ ಜಾಗರೂಕರಾಗಿರಿ” ಎಂಬ ರೀತಿಯಲ್ಲಿ ಅರ್ಥೈಸಬಹುದು. ಭಾರತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ  ವಿದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.petrol, ಡೀಸೆಲ್ ಮತ್ತು LPG ದರ ತಕ್ಷಣ ಏರಬಹುದು

  • ಇಂಧನ ಮಿತಿಯಾಗಿ ಬಳಸುವುದು.
  • ಸಾರ್ವಜನಿಕ ಸಾರಿಗೆ ಬಳಸುವುದು.
  • ಒಂದೇ ಕೆಲಸಕ್ಕೆ ಹಲವು ಸಾರಿ ಹೋಗುವುದನ್ನು ಕಡಿಮೆ ಮಾಡುವುದು.

ನನ್ನ ಅಭಿಪ್ರಾಯದಲ್ಲಿ, ಇಂತಹ ಸಂದರ್ಭಗಳಲ್ಲಿ ಸರ್ಕಾರದ ಸಂದೇಶ ಜನರಿಗೆ ಮುಂಚಿತ ಸಿದ್ಧತೆಯ ಮನೋಭಾವ ನೀಡುತ್ತದೆ. ಎಣ್ಣೆ ಉಳಿಸುವುದು ಪರಿಸರಕ್ಕೂ ಒಳ್ಳೆಯದು, ಅನಾವಶ್ಯಕ ಚಿನ್ನ ಖರೀದಿ ಕಡಿಮೆ ಮಾಡುವುದು ಕುಟುಂಬದ ಹಣಕಾಸಿಗೂ ಸಹಕಾರಿ. ಆದರೆ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಬೆಲೆಭಾರ ಬಾರದಂತೆ ಸರ್ಕಾರವು ಸಹ ಸಬ್ಸಿಡಿ, ಬೆಲೆ ನಿಯಂತ್ರಣ ಮತ್ತು ಉದ್ಯೋಗ ಭದ್ರತೆ ಕಡೆ ಗಮನ ಹರಿಸುವುದು ಅತ್ಯಗತ್ಯ. ಒಟ್ಟಿನಲ್ಲಿ, Narendra Modi ಅವರ ಈ ಸಂದೇಶವು ಕೇವಲ ರಾಜಕೀಯ ಹೇಳಿಕೆ ಅಲ್ಲ; ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಭಾರತವು ಎಚ್ಚರಿಕೆಯಿಂದ ಸಾಗಬೇಕೆಂಬ ಎಂಬ ಸೂಚನೆ ನೀಡಿದ್ದಾರೆ. ನನ್ನ ವೈಯಕ್ತಿಕವಾಗಿ ಭಾರತದ ಪ್ರಧಾನ ಮಂತ್ರಿ ಗೆ ಧನ್ಯವಾದವನ್ನು ತಿಳಿಸುತ್ತೇನೆ.

 

ಮೋದಿಜಿ ಅವರ ಸಲಹೆಯ ಅಂಶಗಳು!

ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋದು:

  • ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆ
  • ಯುದ್ಧವು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
  • ತೈಲದ ಬೆಲೆ ಏಕೆ ಹೆಚ್ಚಾಗಬಹುದು?
  • Work From Home ಯಾಕೆ ಮತ್ತೆ ಮುಖ್ಯವಾಗುತ್ತಿದೆ?
  • Gold ಖರೀದಿಯನ್ನು ಯಾಕೆ ತಪ್ಪಿಸಬೇಕೆಂದು ಸಲಹೆ?
  • ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ
  • ಮುಂದಿನ ದಿನಗಳಲ್ಲಿ ಏನಾಗಬಹುದು?
  • ತಜ್ಞರ ಅಭಿಪ್ರಾಯ ಮತ್ತು ವಿಶ್ಲೇಷಣೆ
  • ಪಶ್ಚಿಮ ಏಷ್ಯಾದಲ್ಲಿ ಏನು ನಡೆಯುತ್ತಿದೆ?

ಇತ್ತೀಚಿನ ದಿನಗಳಲ್ಲಿ West Asia ಭಾಗದಲ್ಲಿ ಹಲವು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ವಿಶೇಷವಾಗಿ ಇಂಧನ ಉತ್ಪಾದನೆ ಮಾಡುವ ಪ್ರದೇಶಗಳಲ್ಲಿ ಅಸ್ಥಿರತೆ ಉಂಟಾದಾಗ ಅದರ ಪರಿಣಾಮ ನೇರವಾಗಿ ಜಾಗತಿಕ ಮಾರುಕಟ್ಟೆಗೆ ತಲುಪುತ್ತದೆ.  ಜಗತ್ತಿನ ಬಹುತೇಕ ರಾಷ್ಟ್ರಗಳು ಮಧ್ಯಪ್ರಾಚ್ಯದ ತೈಲದ ಮೇಲೆ ಅವಲಂಬಿತವಾಗಿವೆ. ಭಾರತ ಕೂಡ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಜನ ಸಾಮಾನ್ಯರ ಮೇಲೆ ಈ ಯುದ್ಧ ಅಥವಾ ಸಂಘರ್ಷ ಗಂಭೀರ ಪರಿಣಾಮ ಭಾರತದಲ್ಲಿ ಹೇರಿದೆ:

  • ಪೆಟ್ರೋಲ್ ದರ
  • ಡೀಸೆಲ್ ಬೆಲೆ
  • LPG ದರ
  • ವಿಮಾನ ಪ್ರಯಾಣ ವೆಚ್ಚ
  • ಸಾರಿಗೆ ವೆಚ್ಚ

Read more

May 2026 bank holidays: ಯಾವ ದಿನ ಬ್ಯಾಂಕ್ ಬಂದ್? ರಾಜ್ಯವರು ಸಂಪೂರ್ಣ ಮಾಹಿತಿ ಇಲ್ಲಿದೆ!

ನೀವು ಮೇ 2026 ರಲ್ಲಿ ಬ್ಯಾಂಕ್ ಗೆ ಹೋಗುವ ಯೋಜನೆ

ಮೇ ತಿಂಗಳಲ್ಲಿ ಯಾವ ದಿನ ಬ್ಯಾಂಕ್ ರಜೆ? ಹಣಕಾಸು ಕೆಲಸ ಮಾಡುವ ಮುನ್ನ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ!

 

ನೀವು ಮೇ 2026 ರಲ್ಲಿ ಬ್ಯಾಂಕ್ ಗೆ ಹೋಗುವ ಯೋಜನೆ ಮಾಡಿದ್ದೀರಾ?

ಹಣ ಜಮಾ ಮಾಡುವುದು, ಚೆಕ್ ಕ್ಲಿಯರ್ ಮಾಡಿಸುವುದು,EMI ಪಾವತಿಸುವುದು, ಹೊಸ ಖಾತೆ ತೆರೆಯುವುದು ಅಥವಾ loan – related ಕೆಲಸಗಳಿದ್ದಾರೆ ಈ ಮಾಹಿತಿ ನಿಮಗೇ ತುಂಬಾ ಮುಖ್ಯ. ಯಾಕಂದ್ರೆ ಮೇ 2026 ತಿಂಗಳಲ್ಲಿ  ದೇಶದ ಹಲವು ಭಾಗಗಳಲ್ಲಿ ಬ್ಯಾಂಕ್ ಗಳು ಅನೇಕ ದಿನ ಬಂದ್ ಆಗಲಿದೆ. ಕೆಲ ದಿನಗಳು ದೇಶದಾಂತ್ಯ ರಜೆ ಇದ್ದರೆ, ಕೆಲವು ದಿನಗಳಲ್ಲಿ ರಾಜ್ಯವಾರು ಮಾತ್ರ ಬ್ಯಾಂಕ್ ಸೇವೆಗಳು ಸ್ಥಗಿತವಾಗಲಿದೆ. ಬ್ಯಾಂಕ್ ಗಳು ಸರ್ಕಾರದ ಆದೇಶದ ಪ್ರಕಾರ ಕೆಲವು ವಿಶೇಷ ದಿನಗಳಲ್ಲಿ ಕಾರ್ಯನಿರ್ವಹಿಸಿದೆ ಇರುವ ದಿನವನ್ನು ಬ್ಯಾಂಕ್ ರಜೆ ಎಂದು ಹೇಳುತ್ತಾರೆ. ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತಾರೆ, ಆದರೆ ಕೆಲವೊಮ್ಮೆ ATM, online banking,UPI ಸೇವೆಗಳು ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಬ್ಯಾಂಕ್ ರಜೆಗಳು ಜನರ ಬ್ಯಾಂಕಿಂಗ್ ಕಾರ್ಯಗಳಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ದೊಡ್ಡ ಹಬ್ಬಗಳಿಗಿಂತ ಸರ್ಕಾರಿ ಆಚರಣೆಗಳು ಹಾಗೂ ಸ್ಥಳೀಯ ಕಾರ್ಯಕ್ರಮಗಳ ಆಧಾರದ ಮೇಲೆ ಕೆಲವು ಭಾಗಗಳಲ್ಲಿ ರಜೆ ಘೋಷಣೆಯಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಜನರ ಜೀವನ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. Salary credit ಇಂದ online payment ವರೆಗೆ ಪ್ರತಿಯೊಂದು ಕಲಸಕ್ಕೂ ಬ್ಯಾಂಕ್ ಅಗತ್ಯವಿದೆ. ವ್ಯಾಪಾರಿಗಳಿಗೆ payment delay ವಿದ್ಯಾರ್ಥಿಗಳಿಗೆ fees ಸಮಸ್ಯೆ ಹಿರಿಯ ನಾಗರಿಕರಿಗೆ pension ತೊಂದರೆ ಸಣ್ಣ ಉದ್ಯಮಗಳಿಗೆ cash flow ಸಮಸ್ಯೆ ಮನೆಮಂದಿಗೆ ಎಟಿಎಂ cash ಸಮಸ್ಯೆ ಇವೆಲ್ಲವೂ ಎದುರಾಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಮೇಲೆ ತುಂಬಾ ಪರಿಣಾಮ ಬೀರುತ್ತದೆ. Business man, company, shops ಎಲ್ಲರಿಗೂ ತುಂಬಾ ಪರಿಣಾಮ ಬೀರಿದೆ.

ವಿಶೇಷವಾಗಿ:

  • ವ್ಯಾಪಾರಿಗಳಿಗೆ payment delay
  • ವಿದ್ಯಾರ್ಥಿಗಳಿಗೆ fee ಸಮಸ್ಯೆ
  • ಹಿರಿಯ ನಾಗರಿಕರಿಗೆ pension ತೊಂದರೆ
  • ಸಣ್ಣ ಉದ್ಯಮಿಗಳಿಗೆ cash flow ಸಮಸ್ಯೆ
  • ಮನೆಮಂದಿಗೆ ATM cash ಸಮಸ್ಯೆ
  • ಇವೆಲ್ಲವೂ ಎದುರಾಗುವ ಸಾಧ್ಯತೆ ಇದೆ.

Read more

LPG ಗ್ಯಾಸ್ ನಲ್ಲಿ ಹೊಸ ನಿಯಮಗಳು 2026!

LPG & PNG ಹೊಸ ಮಾಹಿತಿ

ಗ್ಯಾಸ್ ಬುಕ್ಕಿಂಗ್ ನಿಂದ OTP ವರೆಗೆ ಪ್ರತಿಯೊಂದು ಕುಟುಂಬವು ತಿಳಿಯಬೇಕಾದ ದೊಡ್ಡಬದಲಾವಣೆ!   ಒಂದು ಸಮಯದಲ್ಲಿ LPG ಗ್ಯಾಸ್ ಸಿಲಿಂಡರ್ ಎಂದರೆ ಕೇವಲ ಅಡುಗೆ ಮನೆಯ ಅವಶ್ಯಕತೆ …

Read more

Vijay ರಾಜಕೀಯಕ್ಕೆ ಎಂಟ್ರಿ: “ಜನನಾಯಕ” ಯುಗ ಆರಂಭವೇ? 2026ರಲ್ಲಿ ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಬದಲಾವಣೆ!

ವಿಜಯ್ ಹೊಸ ರಾಜಕೀಯ ಪಕ್ಷ

Vijay Entry: ದಕ್ಷಿಣ ಭಾರತದ ರಾಜಕೀಯದಲ್ಲಿ ‘ಜನನಾಯಕ’ ಅಲೆ ಶುರುವಾಯಿತೇ? ಸಿನಿಮಾ ಪರದೆ ಮೇಲೆ ಕೋಟಿ ಕೋಟಿ ಜನರ ಮನ ಗೆದ್ದ ವ್ಯಕ್ತಿ…ಒಂದು ಡೈಲಾಗ್ ಹೇಳಿದರೆ theatre …

Read more

HALನಲ್ಲಿ ಹೈ-ವೋಲ್ಟೇಜ್ ಮೀಟಿಂಗ್: ಮೋದಿ ಎದುರು ಸಿದ್ದರಾಮಯ್ಯ 18 ಬೇಡಿಕೆಗಳು – ಕರ್ನಾಟಕಕ್ಕೆ ಏನು ಲಾಭ?

ಬೆಂಗಳೂರು: ರಾಜ್ಯಕ್ಕೆ ಆಗಮಿಸಿದ ಪ್ರಧಾನಮಂತ್ರಿ Narendra Modi ಅವರನ್ನು HAL ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ Siddaramaiah ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ, …

Read more

ಪಾಕಿಸ್ತಾನಕ್ಕೆ ದೊಡ್ಡ ಶಾಕ್! ‘ಡೀಲಿಮಿಟೇಷನ್ 2026’ ಮೂಲಕ POK ಕ್ಷೇತ್ರ ಮರುಹಂಚಿಕೆಗೆ ಕೇಂದ್ರದ ಬಿಗಿ ಹೆಜ್ಜೆ!

ಪಾಕಿಸ್ತಾನಕ್ಕೆ ಸ್ಪಷ್ಟ ರಾಜಕೀಯ ಸಂದೇಶ ನೀಡುವಂತಹ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಕೈಗೊಳ್ಳಲು ಸಜ್ಜಾಗಿದೆ. ದೇಶದ ಸಂವಿಧಾನಾತ್ಮಕ ನಿಲುವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ‘ಡೀಲಿಮಿಟೇಷನ್ 2026’ ಮಸೂದೆ …

Read more

‘ಹಾರ್ಮುಜ್ ಜಲಸಂಧಿ ಶಾಶ್ವತವಾಗಿ ತೆರೆಯುತ್ತೇವೆ’ – Donald Trump ಘೋಷಣೆ Jinping ಜೊತೆ ಮಹತ್ವದ ಮಾತುಕತೆ

ಹಾರ್ಮುಜ್ ಜಲಸಂಧಿಯನ್ನು ಶಾಶ್ವತವಾಗಿ ತೆರೆಯುತ್ತೇವೆ ಎಂದು ಟ್ರಂಪ್ ಘೋಷಣೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಹತ್ವದ ಮಾತುಕತೆ, ಇರಾನ್ ಯುದ್ಧದ ಅಂತ್ಯಕ್ಕೆ ಸೂಚನೆ.   ವಿಶ್ವ …

Read more

ಸಕ್ಕರೆ ನಗರ ಮಧುರ ಮಂಡ್ಯದಲ್ಲಿ ಕನ್ನಡದಲ್ಲಿ ಮಾತಾಡಿದ Narendra Modi: ವಿಕಸಿತ ಭಾರತದಿಗಾಗಿ 9 ಮಹತ್ವದ ಸಂಕಲ್ಪಗಳಿಗೆ ಕರೆ

ಮಂಡ್ಯದಲ್ಲಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಮಾಡಿ 9 ಸಂಕಲ್ಪಗಳನ್ನು ಘೋಷಿಸಿದರು. ನೀರು ಸಂರಕ್ಷಣೆದಿಂದ ಸ್ವದೇಶಿ ಬಳಕೆವರೆಗೆ ಪ್ರಮುಖ ಕರೆಗಳ ಸಂಪೂರ್ಣ ವಿವರ ಇಲ್ಲಿ ಓದಿ.   …

Read more

ತಾಯಿ ಲಕ್ಷ್ಮೀ ಬಾಂಡ್ ಯೋಜನೆ 2026: ಅರ್ಜಿ ವಿಧಾನ, ಅರ್ಹತೆ, ಲಾಭಗಳು

ತಾಯಿ ಲಕ್ಷ್ಮೀ ಬಾಂಡ್ ಯೋಜನೆ 2026ಗೆ ಹೇಗೆ ಅರ್ಜಿ ಹಾಕುವುದು? ಅರ್ಹತೆ, ಅಗತ್ಯ ದಾಖಲೆಗಳು, ಲಾಭಗಳು ಮತ್ತು ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.   ತಾಯಿ ಲಕ್ಷ್ಮೀ …

Read more