Telegram Join My Telegram   WhatsApp Join My WhatsApp

West Asia Conflict: ದೇಶಕ್ಕೆ ಮೋದಿ ಮನವಿ

Oil ಉಳಿಸಿ, Work From Home ಗೆ ಆದ್ಯತೆ ನೀಡಿ, ಒಂದು ವರ್ಷ ಚಿನ್ನ ಖರೀದಿ ಬೇಡ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಪ್ರಧಾನಿ ಮೋದಿ ನೀಡಿದ ಮಹತ್ವದ ಸಂದೇಶ!

ಇತ್ತೀಚಿಗೆ ನಾವು ನೋಡುತ್ತಿರೋವುದೇ ಇರಾನ್ ಇಸ್ರೇಲ್ ಯುದ್ಧ. ಇದು ಯಾವ ರೀತಿ ಪರಿಣಾಮ ಬೀರಿದೆ ಎಂದರೆ ಜನ ಸಾಮಾನ್ಯರು ಜೀವನ ನಡೆಸುವುದೇ ತುಂಬಾ ಕಷ್ಟಕರ ಸಂಗತಿ ಆದಂತೆ ಇದೆ. ನಾವು ಈ ಗಂಭೀರ ಪರಿಣಾಮವನ್ನು ಯಾವ ರೀತಿ ಎದುರಿಸಬೇಕು ಎಂಬುದು ಸ್ಪಲ್ಪ ಕ್ಲಿಷ್ಟಕರ ಎನಿಸಿದರೂ ಜೀವನ ನಡೆಸಲೇ ಬೇಕು. ಈ ಯುದ್ಧದ ಬಗ್ಗೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಲಹೆಯನ್ನು ನೀಡಿದ್ದಾರೆ. ಅದೇನಂದರೆ,

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಈಗ ಜಗತ್ತಿನ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ. ಯುದ್ಧದ ಪರಿಣಾಮವಾಗಿ ತೈಲದ ಬೆಲೆ ಏರಿಕೆ, ಚಿನ್ನದ ದರದಲ್ಲಿ ಭಾರೀ ಅಸ್ಥಿರತೆ, ಸಾಗಣೆ ವೆಚ್ಚ ಹೆಚ್ಚಳ ಹಾಗೂ ಸಾಮಾನ್ಯ ಜನರ ಜೀವನ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ನರೇಂದ್ರ ಮೋದಿ ಗಮನಿಸಿ ಜನರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಸಾಮಾನ್ಯ ಜನರು ಮತ್ತು ಎಲ್ಲಾ ವರ್ಗದ ಜನರ ಹಿತಾಸಕ್ತಿಯಿಂದ ಹೇಳಿದ್ದಾರೆ.  ಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “Oil ಅನ್ನು ಜಾಗ್ರತೆಯಿಂದ ಬಳಸಿ, ಸಾಧ್ಯವಾದರೆ Work From Home ಅನುಸರಿಸಿ, ಒಂದು ವರ್ಷ Gold ಖರೀದಿ ತಪ್ಪಿಸಿ” ಎಂಬ ಮಾತುಗಳು ಜನರ ಗಮನ ಸೆಳೆದಿವೆ. ಈ ಹೇಳಿಕೆ ಕೇವಲ ಸಲಹೆಯಲ್ಲ; ಭವಿಷ್ಯದ ಆರ್ಥಿಕ ಸವಾಲುಗಳ ಬಗ್ಗೆ ಮುನ್ನೆಚ್ಚರಿಕೆಯ ಸೂಚನೆಯಾಗಿಯೂ ಜನರು ನೋಡುತ್ತಿದ್ದಾರೆ. ಇದು ಮೋದಿ ಹೇಳಿರುವುದು ಸಂತಸ ವ್ಯಕ್ತಪಡಿಸುವ ವಿಷಯವಾಗಿದೆ. ಇದು ಜನರನ್ನು ಹೆದರಿಸುವ ಸಂದೇಶವಾಗಿ ನೋಡಬೇಕಾಗಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗುವ ಸಮಯದಲ್ಲಿ ಉಳಿತಾಯ ಎಷ್ಟು ಮುಖ್ಯ ಮತ್ತು ಜವಾಬ್ದಾರಿಯ ಬಳಕೆ ಎಷ್ಟು ಮುಖ್ಯ ಎಂಬುದನ್ನು ಮೋದಿ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಹೇಳಿದ ಪ್ರಮುಖ ಅಂಶಗಳು!

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾದಾಗ ಮೊದಲ ಪರಿಣಾಮ ಬೀರುವ ಕ್ಷೇತ್ರವೆಂದರೆ ಇಂಧನ ಮಾರುಕಟ್ಟೆ. ಭಾರತವು ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ದೇಶ. ಅಲ್ಲಿ ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಉಂಟಾದರೆ ಪೆಟ್ರೋಲ್, ಡೀಸೆಲ್, LPG ಹಾಗೂ ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಕಾರಣಕ್ಕೆ ಪ್ರಧಾನಿ ಜನರಿಗೆ “ಅಗತ್ಯವಿದ್ದಾಗ ಮಾತ್ರ ವಾಹನ ಬಳಸಿ, ಅನಾವಶ್ಯಕ ಪ್ರಯಾಣ ಕಡಿಮೆ ಮಾಡಿ” ಎಂಬ ಅರ್ಥದಲ್ಲಿ ಎಣ್ಣೆ ಉಳಿಸುವ ಸಂದೇಶ ನೀಡಿರುವಂತೆ ಕಾಣುತ್ತದೆ.

1. Work from home ಗೆ ಆದ್ಯತೆ ಯಾಕೆ?

Work From Home ಬಗ್ಗೆ ಮಾಡಿದ ಉಲ್ಲೇಖವೂ ಇದೇ ಹಿನ್ನೆಲೆಯಲ್ಲಿದೆ. ಕೊರೋನಾ ಸಮಯದಲ್ಲಿ ಜನರು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಈಗ ಮತ್ತೆ ಇಂಧನ ಬಳಕೆ ಕಡಿಮೆ ಮಾಡಲು, ಟ್ರಾಫಿಕ್ ಕಡಿಮೆ ಮಾಡಲು ಮತ್ತು ಕಚೇರಿ ವೆಚ್ಚವನ್ನು ನಿಯಂತ್ರಿಸಲು WFH ಒಂದು ಪರಿಹಾರವಾಗಿ ಪರಿಗಣಿಸಲಾಗುತ್ತಿದೆ. ದಿನವೂ ದೂರ ಪ್ರಯಾಣ ಮಾಡುವ ನೌಕರರಿಗೆ ಇದು ಹಣ ಉಳಿಸುವ ಮಾರ್ಗವಾಗಬಹುದು.

  • ಇಂಧನ ಬಳಕೆ ಕಡಿಮೆ ಆಗುತ್ತದೆ.
  • ಟ್ರಾಫಿಕ್ ಕಡಿಮೆ ಆಗುತ್ತದೆ.
  • ಅನಗತ್ಯ ವಾಹನ ಬಳಕೆ ಕಡಿಮೆ ಆಗುತ್ತದೆ.
  • ಸಾರ್ವಜನಿಕ ಸಾರಿಗೆ ಹೆಚ್ಚು ಬಳಕೆ.

ಕೋರೋನ ಸಮಯದಲ್ಲಿ ಭಾರತ ಇದನ್ನು ಅನುಭವಿಸಿದೆ. ಈಗ ಮತ್ತೆ ಇದೆ ಮಾದರಿಯನ್ನು ಅನುಸರಿಸುವುದು ಉತ್ತಮ.

 

2. “ಒಂದು ವರ್ಷ ಚಿನ್ನ ಖರೀದಿಸಬೇಡಿ ” ಎಂಬುದರ ಅರ್ಥ!

“ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ” ಎಂಬ ಮಾತು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ; ಅದು ಭಾವನೆ ಮತ್ತು ಹೂಡಿಕೆಯ ಪ್ರತೀಕ. ಆದರೆ ಜಾಗತಿಕ ಅನಿಶ್ಚಿತತೆ ಹೆಚ್ಚಾದಾಗ ಚಿನ್ನದ ಬೆಲೆ ವೇಗವಾಗಿ ಏರುತ್ತದೆ. ಇಂತಹ ಸಮಯದಲ್ಲಿ ಜನರು ಅತಿಯಾಗಿ ಚಿನ್ನ ಖರೀದಿಸಿದರೆ ದೇಶದ ವಿದೇಶಿ ವಿನಿಮಯ ಮೇಲೂ ಒತ್ತಡ ಬೀಳಬಹುದು. ಆದ್ದರಿಂದ ತಾತ್ಕಾಲಿಕವಾಗಿ ಅಗತ್ಯವಿಲ್ಲದ ಖರ್ಚುಗಳನ್ನು ನಿಯಂತ್ರಿಸಿ, ಹಣವನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಇದರಲ್ಲಿ ಅಡಗಿದೆ. ಚಿನ್ನ ಎಂಬುದು ಭಾರತದ ಸಾಂಪ್ರದಾಯಕ ಒಂದು ಉಡುಗೆ ಆಗಿದೆ. ಜನರು ಚಿನ್ನ ಖರೀದಿಸಲು ಮದುವೆ ಸಮಾರಂಭಗಳು ಇತರೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದು ರೂಢಿಯೆಂದ ಬಂದಿದೆ ಅದರಂತೆ ಜನರು ಈ ಸಮಾರಂಭದಲ್ಲಿ ಚಿನ್ನ ಖರೀದಿಸುವುದು ಸರಿಯೇ ತಪ್ಪೇ ಎಂದು ಹೇಳುವ ಮೋದಿಜಿ ಅವರು ಈ ವರ್ಷ ಬೇಡ ಮುಂದಿನ ವರ್ಷ ಚಿನ್ನದ ಬೆಲೆ ಕಡಿಮೆ ಆಗಬಹುದು ಆಗ ಖರೀದಿಸಿ ಎಂಬುದು ಈ ಮಾತಿನ ಸಂದೇಶ.

  • ಸಾಮಾನ್ಯ ಮತ್ತು ಮಾದ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಒತ್ತಡ ಆಗಬಹುದು.
  • ಚಿನ್ನದ ಬೆಲೆ ಅತಿಯಾಗಿ ಏರಬಹುದು.
  • ಆರ್ಥಿಕ ಸ್ಥಿರತೆಗೆ ಪರಿಣಾಮ ಬೀರಬಹುದು.
  • ಚಿನ್ನವನ್ನು ಹೆಚ್ಚು ಖರೀದಿಸಿದರೆ ವಿದೇಶಿ ವಿನಿಮಯದ ಮೇಲೆ ಒತ್ತಡ ಬೀಳಬಹುದು.

ಇದರ ಅರ್ಥ ಅವಶ್ಯಕವಿಲ್ಲದ ಖರ್ಚುಗಳಿಗೆ ಕಡಿಮೆ ವೆಚ್ಚವನ್ನು ಹಾಕಿ. ಯಾರೂ ಈ ಮಾತಿಂದ ಹೆದರಿಕೊಳ್ಳುವುದು ಬೇಡ.

3. ಯಾವ ರೀತಿ ಸಾಮಾನ್ಯ ಜನರ ಮೇಲೆ ಪರಿಣಾಮ ಬಿರಬಹುದು? ಎಂದು ಹೇಳಿದ್ದಾರೆ.

ಸಾಮಾನ್ಯ ಜನರ ದೃಷ್ಟಿಯಿಂದ ನೋಡಿದರೆ, ಈ ಮಾತು ಸ್ವಲ್ಪ ಆತಂಕ ಉಂಟುಮಾಡಬಹುದು. “ಯುದ್ಧದ ಪರಿಣಾಮ ಭಾರತಕ್ಕೂ ಬರಬಹುದೇ?” ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ. ಆದರೆ ಇನ್ನೊಂದು ಕಡೆ ಇದು ಮುನ್ನೆಚ್ಚರಿಕೆಯ ಕ್ರಮವಾಗಿಯೂ ಕಾಣಬಹುದು. ಸಂಕಷ್ಟ ಬರುವ ಮೊದಲು ಜನರು ಎಚ್ಚರಿಕೆಯಿಂದ ಖರ್ಚು ಮಾಡುವುದು, ಇಂಧನ ಉಳಿಸುವುದು ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರುವುದು ಉತ್ತಮ ಕ್ರಮವಾಗಿದೆ. ಮೊದಲಿಗೆ ಪೆಟ್ರೋಲ್, ಡೀಸೆಲ್ ಮತ್ತು lpg ಗ್ಯಾಸ್ ದರ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಮಧ್ಯಮ ವರ್ಗ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ತಿಂಗಳ ಖರ್ಚು ನಿರ್ವಹಿಸುವುದು ಕಷ್ಟವಾಗಬಹುದು. ಚಿನ್ನ ಬೆಲೆ ಹೆಚ್ಚಾದರೆ ಮದುವೆ ಮತ್ತು ಹೂಡಿಕೆ ಯೋಜನೆಗಳ ಮೇಲು ಪರಿಣಾಮ ಬೀರುತ್ತದೆ. ಒಟ್ಟಿನಲ್ಲಿ ಜಾಗತಿಕ ಸಂಘರ್ಷದ ದೂರದಲ್ಲಿ ನಡೆಯುತ್ತಿದ್ದರೂ ಅದರ ಆರ್ಥಿಕ ಪರಿಣಾಮ ಸಾಮಾನ್ಯ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

  • ಮಧ್ಯಮ ಮತ್ತು ಸಾಮಾನ್ಯ ವರ್ಗದ ಮೇಲೆ ಬಜೆಟ್ ಒತ್ತಡ ಉಂಟಾಗುತ್ತದೆ.
  • ತರಕಾರಿ, ಆಹಾರ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ.
  • ಸಾಮಾನ್ಯ ಜೀವನ ಕಷ್ಟಕರವಾಗಬಹುದು.

ಕೇವಲ ವಸ್ತುಗಳಿಗೆ ಮಾತ್ರ ಅಲ್ಲ ಜನರ ಜೀವನಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿದ್ದಾರೆ.

4. ಎಣ್ಣೆ ಉಯಿತಾಯ ಯಾಕೆ ಮಾಡಬೇಕು?

ಭಾರತ ಇನ್ನೂ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧದಿಂದ ತೈಲ ಬೆಲೆ ಏಕಾಏಕಿ ಏರಬಹುದು? ಇದರ ಪರಿಣಾಮವಾಗಿ:

ಗ್ರಾಮೀಣ ಪ್ರದೇಶಗಳಲ್ಲಿ LPG, ಡೀಸೆಲ್ ಹಾಗೂ ಸಾರಿಗೆ ವೆಚ್ಚ ಏರಿದರೆ ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಹೊರೆ ಬೀಳಬಹುದು. ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಕುಟುಂಬಗಳು EMI, ಶಾಲಾ ಶುಲ್ಕ, ದಿನಸಿ ಬೆಲೆ ಏರಿಕೆ ಇತ್ಯಾದಿಗಳ ನಡುವೆ ಇನ್ನಷ್ಟು ಖರ್ಚು ನಿಯಂತ್ರಣ ಮಾಡಬೇಕಾಗಬಹುದು. ಹೀಗಾಗಿ ಪ್ರಧಾನಿಯ ಸಂದೇಶವು “ಭಯಪಡುವುದಕ್ಕಿಂತ ಜಾಗರೂಕರಾಗಿರಿ” ಎಂಬ ರೀತಿಯಲ್ಲಿ ಅರ್ಥೈಸಬಹುದು. ಭಾರತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ  ವಿದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.petrol, ಡೀಸೆಲ್ ಮತ್ತು LPG ದರ ತಕ್ಷಣ ಏರಬಹುದು

  • ಇಂಧನ ಮಿತಿಯಾಗಿ ಬಳಸುವುದು.
  • ಸಾರ್ವಜನಿಕ ಸಾರಿಗೆ ಬಳಸುವುದು.
  • ಒಂದೇ ಕೆಲಸಕ್ಕೆ ಹಲವು ಸಾರಿ ಹೋಗುವುದನ್ನು ಕಡಿಮೆ ಮಾಡುವುದು.

ನನ್ನ ಅಭಿಪ್ರಾಯದಲ್ಲಿ, ಇಂತಹ ಸಂದರ್ಭಗಳಲ್ಲಿ ಸರ್ಕಾರದ ಸಂದೇಶ ಜನರಿಗೆ ಮುಂಚಿತ ಸಿದ್ಧತೆಯ ಮನೋಭಾವ ನೀಡುತ್ತದೆ. ಎಣ್ಣೆ ಉಳಿಸುವುದು ಪರಿಸರಕ್ಕೂ ಒಳ್ಳೆಯದು, ಅನಾವಶ್ಯಕ ಚಿನ್ನ ಖರೀದಿ ಕಡಿಮೆ ಮಾಡುವುದು ಕುಟುಂಬದ ಹಣಕಾಸಿಗೂ ಸಹಕಾರಿ. ಆದರೆ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಬೆಲೆಭಾರ ಬಾರದಂತೆ ಸರ್ಕಾರವು ಸಹ ಸಬ್ಸಿಡಿ, ಬೆಲೆ ನಿಯಂತ್ರಣ ಮತ್ತು ಉದ್ಯೋಗ ಭದ್ರತೆ ಕಡೆ ಗಮನ ಹರಿಸುವುದು ಅತ್ಯಗತ್ಯ. ಒಟ್ಟಿನಲ್ಲಿ, Narendra Modi ಅವರ ಈ ಸಂದೇಶವು ಕೇವಲ ರಾಜಕೀಯ ಹೇಳಿಕೆ ಅಲ್ಲ; ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಭಾರತವು ಎಚ್ಚರಿಕೆಯಿಂದ ಸಾಗಬೇಕೆಂಬ ಎಂಬ ಸೂಚನೆ ನೀಡಿದ್ದಾರೆ. ನನ್ನ ವೈಯಕ್ತಿಕವಾಗಿ ಭಾರತದ ಪ್ರಧಾನ ಮಂತ್ರಿ ಗೆ ಧನ್ಯವಾದವನ್ನು ತಿಳಿಸುತ್ತೇನೆ.

 

ಮೋದಿಜಿ ಅವರ ಸಲಹೆಯ ಅಂಶಗಳು!

ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋದು:

  • ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆ
  • ಯುದ್ಧವು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
  • ತೈಲದ ಬೆಲೆ ಏಕೆ ಹೆಚ್ಚಾಗಬಹುದು?
  • Work From Home ಯಾಕೆ ಮತ್ತೆ ಮುಖ್ಯವಾಗುತ್ತಿದೆ?
  • Gold ಖರೀದಿಯನ್ನು ಯಾಕೆ ತಪ್ಪಿಸಬೇಕೆಂದು ಸಲಹೆ?
  • ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ
  • ಮುಂದಿನ ದಿನಗಳಲ್ಲಿ ಏನಾಗಬಹುದು?
  • ತಜ್ಞರ ಅಭಿಪ್ರಾಯ ಮತ್ತು ವಿಶ್ಲೇಷಣೆ
  • ಪಶ್ಚಿಮ ಏಷ್ಯಾದಲ್ಲಿ ಏನು ನಡೆಯುತ್ತಿದೆ?

ಇತ್ತೀಚಿನ ದಿನಗಳಲ್ಲಿ West Asia ಭಾಗದಲ್ಲಿ ಹಲವು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ವಿಶೇಷವಾಗಿ ಇಂಧನ ಉತ್ಪಾದನೆ ಮಾಡುವ ಪ್ರದೇಶಗಳಲ್ಲಿ ಅಸ್ಥಿರತೆ ಉಂಟಾದಾಗ ಅದರ ಪರಿಣಾಮ ನೇರವಾಗಿ ಜಾಗತಿಕ ಮಾರುಕಟ್ಟೆಗೆ ತಲುಪುತ್ತದೆ.  ಜಗತ್ತಿನ ಬಹುತೇಕ ರಾಷ್ಟ್ರಗಳು ಮಧ್ಯಪ್ರಾಚ್ಯದ ತೈಲದ ಮೇಲೆ ಅವಲಂಬಿತವಾಗಿವೆ. ಭಾರತ ಕೂಡ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಜನ ಸಾಮಾನ್ಯರ ಮೇಲೆ ಈ ಯುದ್ಧ ಅಥವಾ ಸಂಘರ್ಷ ಗಂಭೀರ ಪರಿಣಾಮ ಭಾರತದಲ್ಲಿ ಹೇರಿದೆ:

  • ಪೆಟ್ರೋಲ್ ದರ
  • ಡೀಸೆಲ್ ಬೆಲೆ
  • LPG ದರ
  • ವಿಮಾನ ಪ್ರಯಾಣ ವೆಚ್ಚ
  • ಸಾರಿಗೆ ವೆಚ್ಚ

ಎಲ್ಲವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಮೋದಿಜಿ ಅವರ ಸಲಹೆಯ ಮೇರೆಗೆ ನನ್ನ ಅಭಿಪ್ರಾಯ!

ಇಂದಿನ ಜಾಗತಿಕ ಪರಿಸ್ಥಿತಿಯನ್ನು ನೋಡಿದರೆ, ಒಂದು ದೇಶದಲ್ಲಿ ನೆಡೆಯುವ ಯುದ್ಧ ಅಥವಾ ಮತ್ತೊಂದು ದೇಶದ ಸಾಮಾನ್ಯ ಜನರ ಬದುಕಿನ ಮೇಲೂ ಹೇಗೆ ಪರಿಣಾಮ ಬೀರಬಹುದು ಎಂಬುದು ನನ್ನ ಅನಿಸಿಕೆ ಆಗಿದೆ. ” ಎಣ್ಣೆ ಉಳಿಸಿ, work from home ಆದ್ಯತೆ ನೀಡಿ, ಒಂದು ವರ್ಷ ಆದಮೇಲೆ ಚಿನ್ನ ಖರೀದಿಸಿ” ಇವೆಲ್ಲವೂ ಮೋದಿ ಅವರು ಭಾರತದ ಜನರಿಗೆ ನೀಡಿದ ಸಲಹೆಗಳೂ ಹಲವು ಚರ್ಚೆಗಳಿಗೆ ಕಾರಣವಾಗಿದೆ ಎಂಬುದು ಮಾಧ್ಯಮದ ಮೂಲಕ ನಾನು ಗಮನಿಸಿದೆ. ನನ್ನ ಅಭಿಪ್ರಾಯದಲ್ಲಿ ಅವರು ಭಯ ಹುಟ್ಟಿಸುವಂತ ಮಾಹಿತಿ ನೀಡಿಲ್ಲ ಜನರಿಗೆ ಮುನ್ನೆಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ಎಂಬುದು ನನ್ನ ಅಭಿಪ್ರಾಯ.

“Oil ಅನ್ನು ಜಾಗ್ರತೆಯಿಂದ ಬಳಸಿ” ಎಂಬ ಸಂದೇಶದ ಅರ್ಥ ನಿಮಗೇ ನಾನು ತಿಳಿಸುತ್ತಿನಿ?

ಭಾರತದಂತಹ ದೇಶಕ್ಕೆ ತೈಲವು ಕೇವಲ ವಾಹನಗಳಿಗೆ ಬೇಕಾಗುವ ವಸ್ತುವಲ್ಲ. ಅದು ಸಂಪೂರ್ಣ ಆರ್ಥಿಕ ವ್ಯವಸ್ಥೆಯ ಹೃದಯದಂತಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವುದರಿಂದ ಹಿಡಿದು, ಮನೆಯ ಅಡಿಗೆ ಮಾಡುವವರೆಗೂ ಎಲ್ಲದರಲ್ಲೂ ಇಂಧನದ ಪಾತ್ರ ಇದೆ. ತೈಲ ದ ಬೆಲೆ ಏರಿದರೆ ಅದರ ಪರಿಣಾಮ ಸಾಮಾನ್ಯ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ.

ತೈಲದ ಬೆಲೆ ಏರಿದರೆ:

  • ತರಕಾರಿ ಬೆಲೆ ಹೆಚ್ಚುತ್ತದೆ
  • ಸಾರಿಗೆ ವೆಚ್ಚ ಏರಿಕೆ
  • ಆಹಾರ ಪದಾರ್ಥಗಳ ದರ ಹೆಚ್ಚಳ
  • ಉತ್ಪಾದನಾ ವೆಚ್ಚ ಹೆಚ್ಚಳ
  • ಸಾಮಾನ್ಯ ಜನರ ತಿಂಗಳ ಖರ್ಚು ಏರಿಕೆ
  • ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ.

ಆದ್ದರಿಂದ ತೈಲವನ್ನು ಉಳಿಸುವುದು ಎಂದರೆ ಕೇವಲ ಹಣ ಉಳಿಸುವುದಲ್ಲ ದೇಶದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದಾಗಿದೆ.

Work From Home ಅನ್ನು ಮಾಡುವ ಪರಿಸ್ಥಿತಿಯನ್ನು ಜನರು ಮಾಡಬೇಕೆ?

Covid ಸಮಯದಲ್ಲಿ ಜನರು Work From Home ಪದ್ಧತಿಗೆ ಹೊಂದಿಕೊಂಡಿದ್ದರು. ಈಗ ಮತ್ತೆ ಅದೇ ಮಾದರಿ ಚರ್ಚೆಗೆ ಬಂದಿದೆ. ಅನೇಕ ಕಂಪನಿಗಳು ಮತ್ತು ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡಿ ಹಣ ಗಳಿಸುತ್ತಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಹೆಚ್ಚಾದ ಸಂದರ್ಭದಲ್ಲಿ ಸಾಧ್ಯವಾದ ಉದ್ಯೋಗಗಳನ್ನು work from home ಬಳಸಿದರೆ ಹಲವು ಲಾಭಗಳಿವೆ. ಇಂಧನ ಬಳಕೆ ಕಡಿಮೆ ಆಗುತ್ತದೆ, ಜನರ ಟ್ರಾಫಿಕ್ ಸಮಯ ಉಳಿಯುತ್ತದೆ. ಎಲ್ಲ ಕೆಲಸಗಳಿಗೂ ಇದು ಸಾಧ್ಯವಿಲ್ಲ ಎನ್ನುವುದು ಸತ್ಯ ಆದರೆ ಸಾಧ್ಯವಾದ ಕಡೆ ಬಳಸಿದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.

ಇದಕ್ಕೆ ಪ್ರಮುಖ ಕಾರಣಗಳು:

1. Fuel Consumption ಕಡಿಮೆ ಆಗುತ್ತದೆ.

ಜನರು ಪ್ರತಿದಿನ office ಗೆ ಪ್ರಯಾಣ ಮಾಡದಿದ್ದರೆ:

  1. ಪೆಟ್ರೋಲ್ ಬಳಕೆ ಕಡಿಮೆ
  2. ಟ್ರಾಫಿಕ್ ಕಡಿಮೆ
  3. ಸಾರ್ವಜನಿಕ ಸಾರಿಗೆ ಒತ್ತಡ ಕಡಿಮೆ

ಇವು ದೇಶದ ಇಂಧನ ಬಳಕೆಯನ್ನು ನಿಯಂತ್ರಿಸಬಹುದು.

2. ಉದ್ಯೋಗಿಗಳಿಗೆ ಹಣ ಉಳಿವು.

Work From Home ಇದ್ದರೆ:

  1. ಪ್ರಯಾಣ ವೆಚ್ಚ ಕಡಿಮೆ.
  2. ಹೊರ ಊಟ ವೆಚ್ಚ ಕಡಿಮೆ.
  3. ಸಮಯ ಉಳಿವು.

ಇವು ಕುಟುಂಬದ ಖರ್ಚು ಕಡಿಮೆ ಮಾಡಲು ಸಹಾಯ ಮಾಡಬಹುದು.

3. ಪರಿಸರದ ಮೇಲೂ ಉತ್ತಮ ಪರಿಣಾಮ.

ಕಡಿಮೆ ವಾಹನಗಳು ಎಂದರೆ:

  1. ಕಡಿಮೆ Pollution.
  2. ಉತ್ತಮ ಗಾಳಿ ಗುಣಮಟ್ಟ.
  3. ಕಡಿಮೆ ಕಾರ್ಬನ್ ಉತ್ಸರ್ಗ.

4. “ಒಂದು ವರ್ಷ Gold ಖರೀದಿ ಬೇಡ” ಎಂಬ ಸಲಹೆ ಯಾಕೆ?

ಯುದ್ಧ ಅಥವಾ ಜಾಗತಿಕ ಅಸ್ಥಿರತೆ ಹೆಚ್ಚಾದಾಗ ಜನರು ಸಾಮಾನ್ಯವಾಗಿ Gold ಕಡೆಗೆ ಓಡುತ್ತಾರೆ. ಏಕೆಂದರೆ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

ಆದರೆ ದೊಡ್ಡ ಪ್ರಮಾಣದಲ್ಲಿ Gold ಖರೀದಿ ನಡೆದರೆ:

  1. ಚಿನ್ನದ ಬೆಲೆ ಭಾರೀ ಏರಿಕೆ
  2. ದೇಶದ Import Bill ಹೆಚ್ಚಳ
  3. ರೂಪಾಯಿ ಮೌಲ್ಯ ಮೇಲೆ ಒತ್ತಡ ಉಂಟಾಗಬಹುದು.

ಭಾರತವು ಜಗತ್ತಿನ ಅತಿ ದೊಡ್ಡ Gold Import ದೇಶಗಳಲ್ಲಿ ಒಂದಾಗಿದೆ. ಆದ್ದರಿಂದ ಚಿನ್ನದ ಆಮದು ಹೆಚ್ಚಾದರೆ ದೇಶದ ವಿದೇಶಿ ವಿನಿಮಯ ಸಂಗ್ರಹದ ಮೇಲೂ ಒತ್ತಡ ಬೀಳಬಹುದು.

ಸಾಮಾನ್ಯ ಜನರ ಮೇಲೆ ಇದರ ಪರಿಣಾಮ ಏನು?

1.Middle Class ಕುಟುಂಬದವರಿಗೆ ಸಂಕಷ್ಟ 

  • ತಿಂಗಳ ಬಜೆಟ್ ಅಸ್ತವ್ಯಸ್ತ
  • EMI ಒತ್ತಡ
  • ಆಹಾರ ವೆಚ್ಚ ಹೆಚ್ಚಳ
  • ಮಕ್ಕಳ ಶಿಕ್ಷಣ ವೆಚ್ಚದ ಮೇಲೆ ಪರಿಣಾಮ

2. ವ್ಯಾಪಾರಿಗಳು

  • ಸಾಗಣೆ ವೆಚ್ಚ ಹೆಚ್ಚಳ
  • ಲಾಭ ಕಡಿಮೆ
  • ಉತ್ಪನ್ನ ದರ ಏರಿಕೆ

3. ರೈತರು

  • ಡೀಸೆಲ್ ವೆಚ್ಚ ಹೆಚ್ಚಳ
  • ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳ

 

Petrol ಮತ್ತು LPG ದರ ಏರಿದರೆ ಏನಾಗಬಹುದು?

ಭಾರತದಲ್ಲಿ ಪೆಟ್ರೋಲ್ ಮತ್ತು LPG ದರಗಳು ನೇರವಾಗಿ ಜನರ ಜೀವನಕ್ಕೆ ಸಂಬಂಧಿಸಿದ್ದಾಗಿವೆ.

LPG ಬೆಲೆ ಏರಿದರೆ:

  • ಮನೆಯ ಅಡುಗೆ ವೆಚ್ಚ ಹೆಚ್ಚಳ
  • ಹೋಟೆಲ್ ಆಹಾರ ದರ ಏರಿಕೆ
  • Petrol/Diesel ಬೆಲೆ ಏರಿದರೆ:
  • Bus Charges ಹೆಚ್ಚಳ
  • Taxi Charges ಹೆಚ್ಚಳ
  • Online Delivery Charges ಹೆಚ್ಚಳ

ಇವೆಲ್ಲವೂ ಸಾಮಾನ್ಯ ಜನರ ದಿನನಿತ್ಯದ ಖರ್ಚನ್ನು ಹೆಚ್ಚಿಸಬಹುದು.

Gold Market ಮೇಲೆ ಯಾವ ಪರಿಣಾಮ?

ಯುದ್ಧ ಸಮಯದಲ್ಲಿ ಸಾಮಾನ್ಯವಾಗಿ:

  • Gold Price ಏರಿಕೆ
  • Investors Safe Investment ಕಡೆ ಹೋಗುವುದು
  • Stock Market ಅಸ್ಥಿರತೆ

ಕಾಣಬಹುದು. ಆದ್ದರಿಂದ ಹಲವರು ಈಗ Gold ಖರೀದಿ ಮಾಡುವ ಬಗ್ಗೆ ಮರುಚಿಂತನೆ ಮಾಡುತ್ತಿದ್ದಾರೆ.

Experts ಏನು ಹೇಳುತ್ತಿದ್ದಾರೆ?

ಆರ್ಥಿಕ ತಜ್ಞರ ಪ್ರಕಾರ:

  • ಭಾರತ ಇಂಧನ ಉಳಿಸುವ ನೀತಿಗೆ ಹೆಚ್ಚು ಒತ್ತು ನೀಡಬೇಕಿದೆ
  • Renewable Energy ಕಡೆ ವೇಗವಾಗಿ ಸಾಗಬೇಕು
  • Public Transport ಬಳಕೆ ಹೆಚ್ಚಿಸಬೇಕು
  • Import ಅವಲಂಬನೆ ಕಡಿಮೆ ಮಾಡಬೇಕು

ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

Analysis: ಇದು ಕೇವಲ ಸಲಹೆಯೇ ಅಥವಾ ಮುನ್ನೆಚ್ಚರಿಕೆಯೇ?

ಬಹುತೇಕ ಜನರು ಈ ಸಂದೇಶವನ್ನು ಸಾಮಾನ್ಯ ಸಲಹೆ ಎಂದು ನೋಡಿದರೂ, ಕೆಲವರು ಇದನ್ನು ಮುಂದಿನ ಆರ್ಥಿಕ ಸವಾಲುಗಳ ಮುನ್ನೆಚ್ಚರಿಕೆಯಾಗಿ ಪರಿಗಣಿಸುತ್ತಿದ್ದಾರೆ.

ಯಾಕೆಂದರೆ:

  • ಜಾಗತಿಕ ಮಾರುಕಟ್ಟೆ ಅಸ್ಥಿರವಾಗಿದೆ
  • Crude Oil ಬೆಲೆಗಳು ಏರಿಕೆಯಲ್ಲಿ ಇವೆ
  • Shipping Routes ಮೇಲೆ ಅಪಾಯ ಹೆಚ್ಚಾಗಿದೆ
  • Dollar ವಿರುದ್ಧ ರೂಪಾಯಿ ಒತ್ತಡದಲ್ಲಿದೆ

ಇವು ಮುಂದಿನ ದಿನಗಳಲ್ಲಿ ಭಾರತದಲ್ಲೂ ಬೆಲೆ ಏರಿಕೆಗೆ ಕಾರಣವಾಗಬಹುದು.

ಈ ರೀತಿಯ ಪರಿಸ್ಥಿತಿಯಲ್ಲಿ ಜನರು Panic ಆಗುವುದಕ್ಕಿಂತ Planning ಮಾಡುವುದು ಮುಖ್ಯ.

  • ಅನಗತ್ಯ ಪ್ರಯಾಣ ಕಡಿಮೆ ಮಾಡುವುದು
  • ಹಣವನ್ನು ಜಾಣ್ಮೆಯಿಂದ ಬಳಕೆ
  • ಅತಿಯಾಗಿ Gold ಖರೀದಿ ಮಾಡದಿರುವುದು
  • Emergency Savings ಉಳಿಸಿಕೊಳ್ಳುವುದು

ಇವು ಮುಂದಿನ ದಿನಗಳಲ್ಲಿ ಕುಟುಂಬದ ಆರ್ಥಿಕ ಭದ್ರತೆಯನ್ನು ಕಾಪಾಡಬಹುದು.

Key Points

  1. ಪಶ್ಚಿಮ ಏಷ್ಯಾ ಸಂಘರ್ಷ ಜಾಗತಿಕ ಆರ್ಥಿಕತೆಗೆ ಪರಿಣಾಮ ಬೀರುತ್ತಿದೆ
  2. Oil Price ಏರಿಕೆಯಿಂದ ಭಾರತಕ್ಕೂ ಒತ್ತಡ
  3. Work From Home ಮತ್ತೆ ಪ್ರಮುಖ ಚರ್ಚೆ
  4. Gold Import ಕಡಿಮೆ ಮಾಡಲು ಸಲಹೆಗಳು
  5. ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗುವ ಸಾಧ್ಯತೆ
  6. Fuel Saving ಈಗ ಅತ್ಯಂತ ಮುಖ್ಯ

FAQ

1. ಪಶ್ಚಿಮ ಏಷ್ಯಾ ಸಂಘರ್ಷ ಭಾರತಕ್ಕೆ ಯಾಕೆ ಮುಖ್ಯ?

ಭಾರತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಅಲ್ಲಿ ಸಂಘರ್ಷ ಉಂಟಾದರೆ ಭಾರತದಲ್ಲಿ ಇಂಧನ ದರ ಏರಬಹುದು.

2. Work From Home ಮತ್ತೆ ಬರಬಹುದೇ?

ಕೆಲವು ಕ್ಷೇತ್ರಗಳಲ್ಲಿ Hybrid ಅಥವಾ WFH ಮಾದರಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ.

3. Gold ಖರೀದಿ ಯಾಕೆ ತಪ್ಪಿಸಬೇಕು?

ಜಾಗತಿಕ ಅಸ್ಥಿರತೆಯಿಂದ Gold ದರ ಏರಬಹುದು. ಇದರಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದೆ.

4. ಸಾಮಾನ್ಯ ಜನರು ಏನು ಮಾಡಬೇಕು?

Fuel Saving, Budget Planning ಮತ್ತು Emergency Savings ಮೇಲೆ ಗಮನ ಕೊಡಬೇಕು.

5. LPG ದರ ಮತ್ತೆ ಏರಬಹುದೇ?

ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಅವಲಂಬಿಸಿ LPG ದರಗಳಲ್ಲಿ ಬದಲಾವಣೆ ಆಗಬಹುದು.

Conclusion

ಇಂದಿನ ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. ಒಂದು ದೇಶದಲ್ಲಿ ನಡೆಯುವ ಘಟನೆ ಇನ್ನೊಂದು ದೇಶದ ಜನರ ಜೀವನದ ಮೇಲೂ ಪರಿಣಾಮ ಬೀರುತ್ತಿರುವ ಕಾಲ ಇದು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವೂ ಅಂಥದ್ದೇ ಒಂದು ದೊಡ್ಡ ಘಟನೆ. ಇದು ಕೇವಲ ಯುದ್ಧದ ಸುದ್ದಿಯಾಗಿ ಮಾತ್ರ ಉಳಿದಿಲ್ಲ; ಈಗ ಅದು ಸಾಮಾನ್ಯ ಜನರ ಮನೆ ಖರ್ಚು, ಉದ್ಯೋಗ, ಇಂಧನ ದರ, ಆಹಾರ ಬೆಲೆ, ಚಿನ್ನದ ಮಾರುಕಟ್ಟೆ ಮತ್ತು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಮಟ್ಟಕ್ಕೆ ಬಂದಿದೆ.

ಭಾರತದಂತಹ ದೊಡ್ಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಇಂತಹ ಪರಿಸ್ಥಿತಿಗಳು ಸದಾ ಸವಾಲಾಗಿರುತ್ತವೆ. ಯಾಕೆಂದರೆ ನಮ್ಮ ದೇಶವು ಇನ್ನೂ ಬಹಳಷ್ಟು ಕಚ್ಚಾ ತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ತೈಲದ ಬೆಲೆ ಏರಿದಾಗ ಅದರ ಪರಿಣಾಮ ಕೇವಲ ಪೆಟ್ರೋಲ್ ಬಂಕ್‌ಗಳಲ್ಲೇ ಕಾಣಿಸುವುದಿಲ್ಲ. ಅದು ನಮ್ಮ ದಿನನಿತ್ಯದ ಜೀವನದ ಪ್ರತಿಯೊಂದು ಭಾಗಕ್ಕೂ ತಲುಪುತ್ತದೆ. ಬಸ್ ಪ್ರಯಾಣದಿಂದ ಹಿಡಿದು ತರಕಾರಿ ಬೆಲೆವರೆಗೂ ಎಲ್ಲವೂ ನಿಧಾನವಾಗಿ ಹೆಚ್ಚಾಗಲು ಆರಂಭವಾಗುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ Narendra Modi ಅವರ ಸಂದೇಶವನ್ನು ಜನರು ಗಂಭೀರವಾಗಿ ನೋಡುತ್ತಿದ್ದಾರೆ. “Oil ಅನ್ನು ಜಾಣ್ಮೆಯಿಂದ ಬಳಸಿ, ಸಾಧ್ಯವಾದರೆ Work From Home ಅನುಸರಿಸಿ, Gold ಖರೀದಿಯಲ್ಲಿ ಎಚ್ಚರಿಕೆ ವಹಿಸಿ” ಎಂಬ ಮಾತುಗಳು ಸಾಮಾನ್ಯ ಸಲಹೆಯಂತೆ ಕಾಣಬಹುದು. ಆದರೆ ಅದರ ಹಿಂದೆ ದೊಡ್ಡ ಆರ್ಥಿಕ ಅರ್ಥವಿದೆ.

ಇಂಧನ ಉಳಿಸುವುದು ಎಂದರೆ ಕೇವಲ ಹಣ ಉಳಿಸುವುದಲ್ಲ. ಅದು ದೇಶದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಒಂದು ಮಾರ್ಗ. ಪ್ರತಿಯೊಬ್ಬ ನಾಗರಿಕ ಸ್ವಲ್ಪ ಮಟ್ಟಿಗೆ Fuel Saving ಮಾಡಿದರೂ ದೇಶದ ಮಟ್ಟದಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಅನಗತ್ಯ ವಾಹನ ಬಳಕೆ ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು, ಹತ್ತಿರದ ಸ್ಥಳಗಳಿಗೆ ನಡೆದು ಹೋಗುವುದು ಇಂತಹ ಸಣ್ಣ ಅಭ್ಯಾಸಗಳೇ ಭವಿಷ್ಯದಲ್ಲಿ ದೊಡ್ಡ ಸಹಾಯ ಮಾಡಬಹುದು.

Work From Home ಕುರಿತು ಮತ್ತೆ ಚರ್ಚೆ ಆರಂಭವಾಗಿರುವುದಕ್ಕೂ ಇದೇ ಕಾರಣ. Covid ಸಮಯದಲ್ಲಿ ಹಲವರು ಈ ಪದ್ಧತಿಗೆ ಹೊಂದಿಕೊಂಡಿದ್ದರು. ಈಗ ಮತ್ತೆ ಕೆಲವು ಕ್ಷೇತ್ರಗಳಲ್ಲಿ Hybrid Work ಅಥವಾ Remote Work ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಉದ್ಯೋಗಿಗಳಿಗೆ ಪ್ರಯಾಣ ವೆಚ್ಚ ಕಡಿಮೆ ಆಗಬಹುದು. ಸಮಯ ಉಳಿಯಬಹುದು. ಜೊತೆಗೆ ಇಂಧನ ಬಳಕೆಯೂ ಕಡಿಮೆಯಾಗುತ್ತದೆ. ಕಂಪನಿಗಳಿಗೂ ಕೆಲವು ಮಟ್ಟದಲ್ಲಿ ವೆಚ್ಚ ಕಡಿಮೆ ಮಾಡಲು ಇದು ಸಹಾಯ ಮಾಡಬಹುದು.

Gold ಖರೀದಿ ಕುರಿತು ಬಂದಿರುವ ಚರ್ಚೆಯೂ ಬಹಳ ಮುಖ್ಯ. ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ; ಅದು ಭಾವನೆ, ಭದ್ರತೆ ಮತ್ತು ಹೂಡಿಕೆಯ ಸಂಕೇತವಾಗಿದೆ. ಆದರೆ ಜಾಗತಿಕ ಉದ್ವಿಗ್ನತೆ ಹೆಚ್ಚಾದಾಗ Gold ದರಗಳು ಅತಿಯಾಗಿ ಏರಬಹುದು. ಆಗ ಸಾಮಾನ್ಯ ಜನರು ಹೆಚ್ಚಿನ ದರಕ್ಕೆ Gold ಖರೀದಿ ಮಾಡಿ ನಂತರ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈಗ ಹಣವನ್ನು ಜಾಣ್ಮೆಯಿಂದ ಬಳಸುವುದು ಅತ್ಯಂತ ಮುಖ್ಯವಾಗಿದೆ. ಈ ಪರಿಸ್ಥಿತಿ ನಮಗೆ ಒಂದು ದೊಡ್ಡ ಪಾಠ ಕಲಿಸುತ್ತದೆ. ಅದು “ಆರ್ಥಿಕ ಶಿಸ್ತು” ಎಂಬುದು. ಆದಾಯ ಎಷ್ಟೇ ಇದ್ದರೂ ಸರಿಯಾದ ಯೋಜನೆ ಇಲ್ಲದಿದ್ದರೆ ಸಂಕಷ್ಟದ ಸಮಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.

Leave a Comment